ಅಭಿಪ್ರಾಯ / ಸಲಹೆಗಳು

ಖಾದಿ ವಲಯ

-:ಖಾದಿ ವಲಯ:-

             ‘ಖಾದಿ’ ಎಂದರೆ ‘ಕೈಯಿಂದ ನೂಲಲ್ಪಟ್ಟ ಹಾಗೂ ಕೈಯಿಂದಲೇ ನೇಯಲ್ಪಟ್ಟ ವಸ್ತ್ರ’.  ಅನೇಕ ಸಾಂಪ್ರದಾಯಿಕ ಕಸುಬುದಾರರು ರಾಜ್ಯದ ಹಳ್ಳಿಗಾಡುಗಳಲ್ಲಿ ಈ ಖಾದಿ ಉದ್ದಿಮೆಯಲ್ಲಿ ನಿರತರಾಗಿದ್ದಾರೆ.  ‘ಖಾದಿ’ ಎಂದರೆ ಅದರಲ್ಲಿ ಅರಳೆ ಖಾದಿ, ರೇಷ್ಮೆ ಖಾದಿ, ಉಣ್ಣೆ ಖಾದಿ ಹಾಗೂ ಪಾಲಿವಸ್ತ್ರಗಳು ಸಹ ಸೇರಿವೆ. ರಾಜ್ಯದಲ್ಲಿ ಒಟ್ಟು 207 ಖಾದಿ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

 

ಖಾದಿ ಬಟ್ಟೆಯ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಃ-

  • “ಅರಳೆ” “ಹತ್ತಿ” ಮತ್ತು “ಕಾಟನ್” ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಕೃಷಿ ಉತ್ಪನ್ನವು ಖಾದಿಯ ಮೂಲ ಕಚ್ಚ ಸಾಮಾಗ್ರಿಯಾಗಿರುತ್ತದೆ. ಇದನ್ನು ಹತ್ತಿಯ ಗಿಡದಿಂದ ತೆಗೆಯಲಾಗುತ್ತದೆ.

                                                           

  • ಜಿನ್ನಿಂಗ್ (ಬೀಜ ಬೇರ್ಪಡಿಸುವಿಕೆ) :

        ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಖರೀದಿಸಿದ ಹತ್ತಿ/ಅರಳೆಯನ್ನು ಬೀಜ ಮತ್ತು ದೂಳಿನ ಕಣಗಳಿಂದ ಬೇರ್ಪಡಿಸುವ ವಿಧಾನವನ್ನು ಜಿನ್ನಿಂಗ್ ಎಂದು ಕರೆಯಲಾಗುತ್ತದೆ.

                                                 

  • ಬ್ಲೋರೂಮ್‍ಃ

        (ಹತ್ತಿಯನ್ನು ಸ್ವಚ್ಚತೆ ಮತ್ತು ಮೃದುಗೊಳಿಸುವುದು) ಹತ್ತಿಯಲ್ಲಿರುವ ಗಂಟುಗಳನ್ನು ಮತ್ತು ದೂಳು ಮತ್ತಿತರೆ ವಸ್ತುಗಳಿಂದ ಬೇರ್ಪಡಿಸಿ ಸ್ವಚ್ಚಗೊಳಿಸುವ ಪ್ರಕ್ರಿಯೆಯೆ  ಬ್ಲೋರೂಮ್ ವಿಧಾನ ಈ ಕ್ರಿಯೆಯಲ್ಲಿ ಅರಳೆಯ ನಾರನ್ನು ವಿವಿಧ ಬೀಟರ್ ಗಳು , ಬ್ಲೇಡ್ ಗಳನ್ನು ಹೊಂದಿರುವ ಯಂತ್ರಗಳ ಸಹಾಯದಿಂದ ನಾರುಗಳ ಶೀಟ್‍ಗಳನ್ನು ತಯಾರಿಸಲಾಗುತ್ತದೆ.

  • ಕಾರ್ಡಿಂಗ್‍ಃ

        ಈ ವಿಧಾನವನ್ನು ನೂಲಿನ ಹೃದಯವೆಂದು ಕರೆಯಲಾಗುತ್ತದೆ. ಈ ವಿಧಾನದಲ್ಲಿ ಹತ್ತಿಯ ನಾರುಗಳನ್ನು ಅತ್ಯಂತ ಸೂಕ್ಷ್ಮವಾಗಿ ಬೇರ್ಪಡಿಸಿ ಗರಿಷ್ಠ ಮಟ್ಟದ ಸ್ವಚ್ಚತೆಯನ್ನು  ಮಾಡಲಾಗುತ್ತದೆ. ಇದರಲ್ಲಿ ಅತ್ಯಂತ ಸೂಕ್ಷ್ಮವಾದ ವೈರಿನ ಕಾರ್ಡಿಂಗ್ ಯಂತ್ರದ ಮೂಲಕ ಕಚ್ಚಾ ಮಾಲು ಸ್ಲೈವರ್ ರೂಪದಲ್ಲಿ ಹೊರಬರುತ್ತದೆ.

  • ಡ್ರಾಯಿಂಗ್‍ಃ

         ಕಾರ್ಡಿಂಗ್ ಪ್ರಕ್ರಿಯೆಯ ಮೂಲಕ ಬರುವ ಸ್ಲೈವರ್ ನ್ನು ಡ್ರಾಯಿಂಗ್ ಯಂತ್ರದಮೂಲಕ ಹಾಸು  ಆಧಾರದಲ್ಲಿ ಹತ್ತಿಯ ನಾರನ್ನು ಹಿಗ್ಗಿಸುವ ಸಲುವಾಗಿ ರೋಲರ್‍ ಗಳು  ಮೂಲಕ ವೇಗದಲ್ಲಿ ತಿರುಗುವ ವಿಧಾನದಿಂದ ರೋವಿಂಗ್ ಮಾಡಲಾಗುತ್ತದೆ. ಈ ಕ್ರಿಯೆಯಲ್ಲಿ ಉತ್ಪನ್ನವು ನೂಲಿಗಿಂತ ನೂರು ಪಟ್ಟು ದಪ್ಪವಾಗಿರುತ್ತದೆ.

 

 

  • ಸಿಂಪ್ಲೆಕ್ಸ್ ರೋವಿಂಗ್‍ಃ

         ಡ್ರ್ರಾಯಿಂಗ್ ವಿಧಾನದಿಂದ ಹೊರಬಂದ ಸ್ಲೈವರ್ ರೂಪದ ಹತ್ತಿಯ ಮೃದುವಾದ ನಾರನ್ನು ಸಿಂಪ್ಲೆಕ್ಸ್ ಮೂಲಕ ರೋವಿಂಗ್ ಬಾಬಿನ್‍ಗೆ ಸುತ್ತಲಾಗುತ್ತದೆ.

  • ನೂಲು ತಯಾರಿಸುವಿಕೆಃ (Spinning)

         ರೋವಿಂಗ್ ಆಗಿರುವ ಅರಳೆಯ ಹಂಜಿಯನ್ನು 8, 10, 12 ಕದರಿನ ಚರಕಗಳ ಮೂಲಕ ದಾರ / ನೂಲಾಗಿ ಮಾರ್ಪಾಡಾಗುತ್ತದೆ. ಇದರಲ್ಲಿ  ಹತ್ತಿ / ಅರಳೆಯ ನಾರುಗಳನ್ನು ತಿರುಚಿ (Twist) ಮಾಡುವ ಮೂಲಕ ದಾರದಲ್ಲಿ  ಸ್ವಲ್ಪ ಗಟ್ಟಿತನ ಬರುವಂತೆ ಈ ವಿಧಾನದಲ್ಲಿ ನೂಲನ್ನು ಲಡಿಗಳ  (Hank) ಮೂಲಕ ಸುತ್ತಲಾಗುತ್ತದೆ.

  • ಸುತ್ತುವಿಕೆಃ (Reeling)

         ತಯಾರಿಸಿದ ಲಡಿಗಳನ್ನು ಚಕ್ರದ ಮೂಲಕ (Wheel)  ಬಾಬಿನ್‍ಗಳಿಗೆ ದಾರವನ್ನು ಸುತ್ತಲಾಗುತ್ತದೆ. ಈ ರೀತಿ ಒಂದು ಲಡಿಯಿಂದ ಸಾವಿರ ಮೀಟರ್‍ ವರೆಗೆ ಬಾಬಿನ್ ಗಳಿಗೆ  ಸುತ್ತಲಾಗುತ್ತದೆ.

  • ವಾರ್ಪಿಂಗ್(ಹಾಸು ವಿಧಾನ);

      ಲಡಿಗಳ ಸಹಾಯದಿಂದ ಸುತ್ತಲಾದ ಬಾಬಿನ್‍ಗಳನ್ನು ವಾರ್ಪಿಂಗ್  ಸ್ಟ್ಯಾಂಡ್ ಮೂಲಕ ಅಳವಡಿಕೆ ಮಾಡಿ ವಾರ್ಪಿಂಗ್ ಭೀಮ್‍ಗೆ ವಾರ್ಪ ದಾರಗಳನ್ನು ಸುತ್ತಲಾಗುತ್ತದೆ.   ವಾರ್ಪಿಂಗ್ ಭೀಮ್ ತಯಾರಿಸುವ ಪೂರ್ವದಲ್ಲಿ ವಾರ್ಪ ದಾರಗಳಿಗೆ ಸ್ಲೈಜಿಂಗ್ ದ್ರಾವಣದ ಮೂಲಕ ಗಂಜಿಯನ್ನು (Starch)  ಮಾಡಲಾಗುತ್ತದೆ.

  • ನೇಯ್ಗೆ (Weaving) :

        ವಾರ್ಪಿಂಗ್  ಭೀಮ್ ಅನ್ನು ಮಗ್ಗಕ್ಕೆ ಅಳವಡಿಸಿ ಹೊಕ್ಕು (Weft) ದಾರದ ಮೂಲಕ ನೇಯಲಾಗುತ್ತದೆ. ವೇಪ್ಟ್ ದಾರವನ್ನು ಅಳವಡಿಸಿ ಎಡದಿಂದ ಬಲಕ್ಕೆ, ಬಲದಿಂದ  ಎಡಕ್ಕೆ ನೇಯಲಾಗುತ್ತದೆ.

  • ಅಂತಿಮ ವಿಧಾನ (Finishing processing):

         ನೇಯಲಾಗಿರುವ ಬಟ್ಟೆಯನ್ನು ಅಂತಿಮವಾಗಿ ಬಟ್ಟೆಯ ತೂಕ ಮತ್ತು ನೂಲಿನ ಕೌಂಟ್ (ಸಂಖ್ಯೆ) ಗಳನ್ನು ಪರೀಕ್ಷಿಸಲಾಗುತ್ತದೆ.

  • ಡೈಯಿಂಗ್ ಮತ್ತು ಪ್ರಿಂಟಿಂಗ್‍ಃ

        ಈ ವಿಧಾನದಲ್ಲಿ ಬೇಕಾದ ಬಣ್ಣಗಳ ಪ್ರಕ್ರಿಯೆಗೆ ಒಳಪಡಿಸಿ ನಂತರ ಬಟ್ಟೆಗಳಿಗೆ ಬೇಕಾದ ಪ್ರಿಂಟಿಂಗ್ ಮಾಡಲಾಗುತ್ತದೆ.

 

 

ಅ. ಮಾರುಕಟ್ಟೆ ಅಭಿವೃಧ್ದಿ ಸಹಾಯಧನ (ಎಂ.ಡಿ.ಎ).

     ಖಾದಿ ಸಂಘ ಸಂಸ್ಥೆಗಳು ಉತ್ಪಾದಿಸುವ ಖಾದಿ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಹಾಗೂ ಕಸುಬುದಾರರಿಗೆ ಹೆಚ್ಚಿನ ಉದ್ಯೋಗವಕಾಶ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಮಾರುಕಟ್ಟೆ ಅಭಿವೃಧ್ದಿ ಸಹಾಯಧನ (ಎಂ.ಡಿ.ಎ) ಯೋಜನೆಯನ್ನು ಜಾರಿಗೆ ತಂದಿರುತ್ತದೆ. ಅದರಂತೆ ರಾಜ್ಯ ಸರ್ಕಾರದಿಂದಲೂ ಸಹ  2012-13 ರಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಮಂಡಳಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಖಾದಿ ಸಂಸ್ಥೆಗಳು ಉತ್ಪಾದಿಸುವ ಖಾದಿ ಉತ್ಪನ್ನಗಳ ಮೇಲೆ ಕರ್ನಾಟಕ ಸರ್ಕಾರದಿಂದ ಶೇ.15 ರಷ್ಟು ಎಂ.ಡಿ.ಎ ನೀಡಲಾಗುವುದು.

 

ಮಾರ್ಗಸೂಚಿ

 

ವಿಷಯ

ದಿನಾಂಕ

ಕಡತದಮೂಲ

ಗಾತ್ರ

ಡೌನ್ಲೋಡ್

ಸುತ್ತೋಲೆ

16-04-2010

ಪಿಡಿಎಫ್‌

10.43 ಎಂಬಿ 

ಡೌನ್ಲೋಡ್

ನಡವಳಿ

25-06-2012

ಪಿಡಿಎಫ್‌

1.19 ಎಂಬಿ

ಡೌನ್ಲೋಡ್

ಸೇರ್ಪಡೆ ಆದೇಶ

09-10-2020

ಪಿಡಿಎಫ್‌

821 ಕೆಬಿ

ಡೌನ್ಲೋಡ್

 

 

ಆ. ಪ್ರೋತ್ಸಾಹ ಮಜೂರಿ:-

ಖಾದಿ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಕಸುಬುದಾರರಿಗೆ ನಿರಂತರ ಉದ್ಯೋಗವಕಾಶ ನೀಡುವ ದೃಷ್ಟಿಯಿಂದ ಹಾಗೂ ಕಸಬುದಾರರ ಜೀವನ ಮಟ್ಟ ಸುದಾರಿಸಲು ರಾಜ್ಯ ಸರ್ಕಾರವು 2013-14ನೇ ಸಾಲಿನಿಂದ ಪ್ರೋತ್ಸಾಹ ಮಜೂರಿ ಯೋಜನೆಯನ್ನು ಮಂಡಳಿಯಲ್ಲಿ ಜಾರಿಗೆ ತಂದಿರುತ್ತದೆ. ಖಾದಿ ಕಸಬುದಾರರಲ್ಲಿ 1) ನೂಲುಗಾರರಿಗೆ ಪ್ರತಿ ಲಡಿಗೆ ರೂ 3.00 ರೂಪಾಯಿ, 2) ನೇಕಾರರಿಗೆ ಪ್ರತಿ ಮೀಟರ್‍ ಗೆ  (ರೇಷ್ಮೇ ಮತ್ತು ಉಣ್ಣೆ ಖಾದಿ ರೂ.6/-, ಅರಳೆಖಾದಿ, ಪಾಲಿವಸ್ತ್ರ ರೂ.7/-) ರೂ. 6 ರಿಂದ 7 ರೂಪಾಯಿ, 3) ಇತರೇ ಕಸುಬುದಾರರಿಗೆ ಪ್ರತಿ ದಿವಸಕ್ಕೆ ರೂ. 9.50 ರೂಪಾಯಿ ಹಾಗೂ 4) ಖಾದಿ ಕಾರ್ಯಕರ್ತರಿಗೆ (ಉತ್ಪಾದನಾ ಕೇಂದ್ರ, ಖಾದಿ ಭಂಡಾರಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ವರ್ಗ) ಉತ್ಪಾದನೆಯ ಮೇಲೆ ಶೇ 9 ರಂತೆ ನೀಡಲಾಗುವುದು.

ಮಾರ್ಗಸೂಚಿ

ವಿಷಯ

ದಿನಾಂಕ

ಕಡತದಮೂಲ

ಗಾತ್ರ

ಡೌನ್ಲೋಡ್

ನಡವಳಿ

23-05-2014

ಪಿಡಿಎಫ್‌

2.32 ಎಂಬಿ 

ಡೌನ್ಲೋಡ್

ಇತ್ತೀಚಿನ ನವೀಕರಣ​ : 29-01-2021 06:26 PM ಅನುಮೋದಕರು: Approver



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080